Welcome to the official website of Karnataka Rheumatology Association (KRA)
ಕರ್ನಾಟಕ ರುಮಾಟಾಲಜಿ ಅಸೋಸಿಯೇಷನ್ ನ ಅಧಿಕೃತ ಜಲತಾಣಕ್ಕೆ ಸುಸ್ವಾಗತ

Rheumatoid arthritis - Kannada

  • kraIndiaRheu2018
  • No Comments

Rheumatoid arthritis – Kannada

ರುಮೆಟಾಯ್ಡ್‌ ಆರ್ತ್ರೈಟಿಸ್‌ (ಮೂಳೆಗಳ ಸಂಧಿವಾತ): ಉತ್ತಮ ಪರಿಣಾಮಕ್ಕಾಗಿ ಸರಿಯಾಗಿ ಚಿಕಿತ್ಸೆಯನ್ನು ತೆಗೆದುಕೊಳ್ಳಿ.

ರುಮೆಟಾಯ್ಡ್‌ ಆರ್ತ್ರಟಿಸ್‌ (ಆರ್‌.ಎ) ಎಂಬುದು ಕೀಲುಗಳಿಗೆ ಸಂಬಂಧಿಸಿದ ಮತ್ತು ಬೇರೆ ಅಂಗಗಳ ಮೇಲೆಯೂ ಪರಿಣಾಮ ಉಂಟು ಮಾಡುವ ದೀರ್ಫಕಾಲಿಕ, ಬಹು ಅ೦ಗಾ೦ಗಗಳ, ಸ್ವಯಂ-ಪ್ರತಿರಕ್ಷಣಾ ಅದವಸ್ಥತೆ.

25-55 ವಯೋವರ್ಗದವರಲ್ಲಿ ರುಮೆಟಾಯ್ಡ್‌ ಆರ್ತೈಟಿಸ್‌ ಪ್ರಕರಣಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ, ಪುರುಷರಿಗಿ೦ತಲೂ ಮಹಿಳೆಯರಲ್ಲಿ ಈ ಕಾಯಿಲೆಯು 2-3 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆ ಇರುವ ಅನೇಕ ರೋಗಿಗಳು ತೀವ್ರತೆಯಲ್ಲಿ ಹೆಚ್ಚು ಕಡಿಮೆಯಾಗುತ್ತಿರುವ ರೀತಿಯ ನೋವನ್ನು ಅನುಭವಿಸುತ್ತಿರುತ್ತಾರೆ. ಈ ಕಾಯಿಲೆಯ ಪರಿಣಾಮವಾಗಿ ಕೀಲುಗಳಲ್ಲಿ ನೋವು ಹೆಚ್ಚುತ್ತಾ ಹೋಗುವುದು, ಎರೂಪತೆ ಮತ್ತು ವೈಕಲ್ಯಗಳು ಉಂಟಾಗಬಹುದು.

ರುಮೆಟಾಯ್ಡ್‌ ಆರ್ತ್ರೈಟಿಸ್‌ನ 70% ರಷ್ಟು ಪ್ರಕರಣಗಳು ವಾರದಿಂದ ತಿ೦ಗಳ ಅವಧಿಯಲ್ಲಿ ನಿಧಾನವಾಗಿ ಆರಂಭವಾಗುತ್ತದೆ. ರೋಗಿಗಳ ಶರೀರದ ಕ ಮತ್ತು ಪಾದಗಳು, ಮುಂಗೈ ಮತ್ತು ಮೊಣಗಂಟಿನ ಸಣ್ಣ ಕೀಲುಗಳಲ್ಲಿ ನೋವು ಮತ್ತು ಊತ ಇರುತ್ತದೆ. ತೋಳು, ಭುಜಗಳು, ಕಣಕಾಲು, ಸೊ೦ಟ ಮತ್ತು ಟೆ೦ಪೊರೋ-ಮ್ಯಾಂಡಿಬ್ಯುಲಾರ್‌ ಕೀಲು(ದವಡೆ) ಮತ್ತು ಬೆನ್ನು ಮೂಳೆಯಲ್ಲಿಯೂ ಸಹ ರೋಗ ಲಕ್ಷಣಗಳು ಇರಬಹುದು. ಬೆಳಗ್ಗಿನ ಸೆಟೆತವು 45 ನಿಮಿಷಕ್ಕಿಂತಲೂ ಹೆಚ್ಚು ಸಮಯ ಇದ್ದು, ದೈಹಿಕ ಚಟುವಟಿಕೆಯಿಂದ ಸರಿಹೋಗುವುದನ್ನು ಗಮನಿಸಲಾಗಿದೆ. ಸಂಧಿವಾತ ಕಾಯಿಲೆಯು ಮುಂದುವರಿದ ಹಾಗೆಲ್ಲಾ ರೋಗಿಗಳಲ್ಲಿ ಜ್ವರ, ತೂಕ ಕಡಿಮೆಯಾಗುವುದು, ಆಯಾಸ, ಶರೀರದ್ಯಾಂತ ನೋವು ಇತ್ಯಾದಿ ಲಕ್ಷಣಗಳೂ ಸಹ
ಕಾಣಿಸಿಕೊಳ್ಳಬಹುದು.

20% ಪ್ರಕರಣಗಳಲ್ಲಿ ರೋಗ-ಲಕ್ಷಣಗಳು ಕಲವು ವಾರಗಳ ಅವಧಿಯಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು 10% ಪ್ರಕರಣಗಳಲ್ಲಿ ಕಾಯಿಲೆಯು ಆರಂಭವಾದ ಕೆಲವೇ ದಿನಗಳಲ್ಲಿ ತೀವ್ರ ರೋಗ-ಲಕ್ಷಣಗಳು ಕಾಣಿಸಿಕೊಳ್ಳಬಹುದು.

ರೋಗಲಕ್ಷಣಗಳು ಕೀಲುಗಳು ಅಷ್ಟೇ ಅಲ್ಲದೆ, ಚರ್ಮ, ಹೃದಯ, ಕಣ್ಣು, ಶ್ವಾಸಾ೦ಗ ಇತ್ಯಾದಿಗಳಲ್ಲಿ ಮತ್ತು ರಕ್ತ ಹೀನತೆಯ ರೂಪದಲ್ಲಿಯೂ ಕಾಣಿಸಿಕೊಳ್ಳಬಹುದು.

ರೋಗಲಕ್ಷಣಗಳನ್ನು ಆರಂಭದ ಹಂತದಲ್ಲಿಯೇ ಪತ್ತೆ ಮಾಡುವುದು, ಸಕಾಲಿಕ ಶಿಫಾರಸುಗಳು ಕಾಯಿಲೆಯ ತಪಾಸಣೆಗೆ ಮತ್ತು ಪರಿಣಾಮಕಾರಿ ನಿಯಂತ್ರಣಕ್ಕೆ ಉತ್ತಮ ಅವಕಾಶಗಳನ್ನು ಒದಗಿಸುತ್ತವೆ. ಇಮೂಲಕ ಕಾಯಿಲೆಯನ್ನು ದೀರ್ಫಕಾಲದವರೆಗೆ ಉಪಶಮನ ಮಾಡುವುದು ಸಾಧ್ಯವಾಗುತ್ತದೆ.

ವೈದ್ಯಕೀಯ ಪರೀಕ್ಷೆಗಳು, ಪ್ರತಿಬಿ೦ಬ ಅಧ್ಯಯನ, ಕೆಲವು ವಿಶೇಷ ರೀತಿಯ ಪ್ರತಿರಕ್ಷಣಾ ಪರೀಕ್ಷೆಗಳೂ ಸೇರಿದಂತೆ ಪ್ರಯೋಗಾಲಯ ಪರೀಕ್ಷೆಗಳ ಮೂಲಕ ಕಾಯಿಲೆಯನ್ನು ತಪಾಸಣೆ ಮಾಡಲಾಗುತ್ತದೆ.

ಕಳದ ಎರಡು ದಶಕಗಳಲ್ಲಿ ರುಮೆಟಾಯ್ಡ್‌ ಆರ್ತ್ರೈಟಸ್‌ಗೆ ಸಂಬ೦ದಿಸಿದ ಫಲಿತಾಂಶಗಳು ಗಮನಾರ್ಹವಾಗಿ ಉತ್ತಮಗೊಂಡಿವೆ. ವೈಕಲದೊಂದಿಗಿನ ಆರ್ತೈಟಸ್‌ ಈಗ ಕಾಣಸಿಗುವುದು ಬಹಳ ವಿರಳವಾಗಿದೆ. ಬಃಲ ಬೇಗನೆ ಚಿಕಿತ್ಸೆಯನ್ನನು ಆರಂಭಿಸುವುದು ಮತ್ತು ಚಿಕಿತ್ಸಾ ಔಷಧಿಗಳ ವ್ಯಾಪಕ ಲಭ್ಯತೆ ಈ ಬೆಳವಣೆಗೆಗೆ ಕಾರಣ ಎನ್ನಬಹುಹದು.

ಕಾಯಿಲೆಯ ಬಗೆಗಿನ ಅರಿವು ಮತ್ತು ಉರಿಯೂತದ ಆರ್ತೈಟಿಸ್‌ ಇರುವ ರೋಗಿಯನ್ನು ಹೆಚ್ಚಿನ ತಪಾಸಣೆಗಾಗಿ ರುಮ್ಕಾಟೋಲಾಜಿಸ್ಟ್‌ಗಳಿಗೆ ಶಿಫಾರಸು ಮಾಡುವುದು ಮತ್ತು ಸಕಾಲಿಕ ಚಿಕಿತ್ಸೆ ಪಡಯುವ ಮೂಲಕ ರುಮೆಟಾಯ್ಡ್‌ ಆರ್ತ್ರೈಟಸ್‌ಗೆ ಸಂಬಂಧಿಸಿದ ಮರಣ ಪ್ರಮಾಣ ಮತ್ತು ರೋಗಸಸ್ಥಿತಿಗಳನ್ನು ಪರಿಣಾಮಕಾರಿಯಾಗಿ ನಿವಾರಿಸಿಕೊಳ್ಳಬಹುದು ಮತ್ತು ರೋಗಿಗಳೂ ಸಹ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು.

kraIndiaRheu2018
Author: kraIndiaRheu2018